ಕೋಟಿ ಕೋಟಿ ದುಡ್ಡು ಮಾಡುವುದು ಹೇಗೆ? ಸುಧಾ ಮೂರ್ತಿ ಸೇರಿದಂತೆ ಎಲ್ಲಾ ಗುಣವಂತ ಹಣವಂತರು ಹೇಳುವುದೇನು ಗೊತ್ತೇ?

ಯಾರಿಗೆ ತಾನೇ ಹಣ ಸಂಪಾದಿಸಿ ಶ್ರೀಮಂತರಾಗಿ ಭರ್ಜರಿ ಜೀವನ ನಡೆಸಬೇಕೆಂದು ಆಸೆ ಇರುವುದಿಲ್ಲ ಹೇಳಿ. ಆದರೆ ಕೋಟಿ ಕೋಟಿ ಹಣ ಸಂಪಾದಿಸುವುದು ಹಾಗೆ ಇರಲಿ ಎಷ್ಟೋ ಜನ ಬಡತನದಿಂದ ಹೊರ ಬರುವುದೇ ಕಷ್ಟವಾಗಿ ಬಿಟ್ಟಿದೆ. ಸುಧಾ ಮೂರ್ತಿ ಮತ್ತು ಇತರೆ ಮಹಾನ್ ಸಾಧಕರು ಹಣದ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾರೆ. ಅವರ ಅನುಭವ ಹಾಗೂ ಸತ್ಯದ ಆ ಮಾತುಗಳು ಏನೆಂದು ತಿಳಿಯೋಣ. ಒಂದು ವೇಳೆ ಹಣವನ್ನು ಸಂಪಾದಿಸಬೇಕೆಂದು ನಾವು ಹಣದ ಹಿಂದೆ ಬಿದ್ದರೆ ಹಣ ನಮ್ಮನು ಬಿಟ್ಟು ದೂರ ಹೋಗುತ್ತದೆಯಂತೆ. ಹಣದ ಹುಚ್ಚು ಹಿಡಿದರೆ ನಮ್ಮ ಜೀವನ ಮಾತ್ರವಲ್ಲ ನಾವು ವಾಸಿಸುವ ಸಮಾಜದ ಸ್ವಾಸ್ಥ್ಯ ಕೂಡ ಹಾಳಾಗಿ ಹೋಗುತ್ತದೆ.

ಆದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಥವಾ ಏನಾದರೂ ಒಂದು ಮಹತ್ವದ ಕಾರ್ಯ ಮಾಡಬೇಕೆಂದು ಮನಸಿನಲ್ಲಿ ದೃಢ ನಿಶ್ಚಯ ಹಾಗೂ ಅಂತಹ ಮಹತ್ವದ ಆಲೋಚನೆ ಇಟ್ಟುಕೊಂಡು ಶ್ರಮಿಸಿದರೆ ಹಣವೇ ನಮ್ಮನು ಹುಡುಕಿಕೊಂಡು ಬರುತ್ತದೆ ಎಂದು ಅವರೆಲ್ಲರೂ ಹೇಳುತ್ತಾರೆ. ಒಂದು ಹಂತದ ವರೆಗೂ ಮಾತ್ರ ಮನುಷ್ಯನಿಗೆ ಹಣ ಆಡಂಬರ ಮಹತ್ವವೆನಿಸಬೇಕು. ನಮಗೆ ಸಾಕಾಗುವಷ್ಟು ಹಣ ಸಿಕ್ಕ ಬಳಿಕ ಉಳಿದುದನ್ನು ನಮ್ಮ ಹಣ ಎಂದು ಇಟ್ಟುಕೊಳ್ಳದೆ ಪರರ ಹಿತಕ್ಕಾಗಿ ಬಳಸಬೇಕು.

ಜೀವನ ಮಾಡಲು ಹಣ ಬೇಕೇ ಬೇಕು. ಹಣವಿಲ್ಲದೆ ಮನುಷ್ಯ ಹೆಣದಂತೆ. ಆದರೆ ಕೇವಲ ಹಣದಿಂದ ಎಲ್ಲವೂ ಸಿಗುವುದಿಲ್ಲ. ಹಣದಿಂದ ವೈದ್ಯರನ್ನು ಕೊಂಡುಕೊಳ್ಳಬಹುದು ಆದರೆ ಆರೋಗ್ಯವನ್ನು ಅಲ್ಲ. ಹಣದಿಂದ ಎಲ್ಲಾ ಕೊಂಡುಕೊಳ್ಳಬಹುದು ಆದರೆ ಸಂತೋಷ ನೆಮ್ಮದಿಯನ್ನು ಅಲ್ಲ. ಆತ್ಮವನ್ನು ಪರೋಪಕಾರದಿಂದ ತೃಪ್ತಿ ಪಡಿಸಬಹುದುದೇ ವಿನಹಃ ದುಡ್ಡಿನಿಂದ ಅಲ್ಲ. ಆದ್ದರಿಂದ ಇರುವುದರಲ್ಲಿ ತೃಪಿಯಾಗಿರುವುದನ್ನು ಮೊದಲು ಕಲಿಯಬೇಕು. ಹಣದ ಹಿಂದೆ ಓಡದೆ ಸಾಧನೆಯ ಹಿಂದೆ ಓಡಬೇಕು. ದೇವರು ನಮಗೆ ಸಾಕಷ್ಟು ಐಶ್ವರ್ಯ ಕೊಟ್ಟಾಗ ಅದನ್ನು ಸಮಾಜದ ಏಳಿಗೆಗಾಗಿ ಬಳಸಬೇಕು ಎಂಬುದು ಸುಧಾ ಅಮ್ಮನವರ ಹೃದಯದ ಮಾತು.

Leave a Comment