ನಿಮ್ಮ ಮೇಲೆ ನಂಬಿಕೆ ಇಡಿ : ಸಾಧಿಸುವುದು ಯಾರಿಗೂ ಯಾವುದೂ ಕಷ್ಟವಲ್ಲ : ಇಲ್ಲಿದೆ ಸ್ಫೂರ್ತಿದಾಯಕ ವಿಡಿಯೋ

ಇದೊಂದು ಅದ್ಭುತ ಸ್ಫೂರ್ತಿದಾಯಕ ವಿಡಿಯೋ. ಈ ಸಾಧಕರನ್ನು ಕಂಡು ಎಲ್ಲರೂ ಬೆರಗುಗೊಂಡಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಮನಗೆದ್ದಿದೆ. ಛಲ ಮತ್ತು ಆತ್ಮವಿಶ್ವಾಸಕ್ಕೂ ಈ ವಿಡಿಯೋ ಸಾಕ್ಷಿಯಾಗಿದೆ.

ಆತ್ಮವಿಶ್ವಾಸವೊಂದಿದ್ದರೆ ಯಾವುದೇ ಸಾಧನೆಯೂ ಕಷ್ಟವಲ್ಲ. ಇದನ್ನು ತೋರಿಸಿದ ಅದೆಷ್ಟೋ ಅಪ್ರತಿಮ ಸಾಧಕರು ನಮ್ಮ ನಡುವೆ ಇದ್ದಾರೆ. ಇಂತಹ ಪ್ರತಿಭಾವಂತರ ಜೀವನ ಎಲ್ಲರಿಗೂ ಸ್ಫೂರ್ತಿ, ಮಾದರಿ… ಇದು ಕೂಡಾ ಅಂತಹದ್ದೇ ಒಬ್ಬರು ಸಾಧಕರ ಸ್ಫೂರ್ತಿದಾಯಕ ದೃಶ್ಯ.

ಬದುಕಿನಲ್ಲಿ ಎದುರಾಗದ ಅನಿರೀಕ್ಷಿತ ಸವಾಲುಗಳೇ ಇಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸವಾಲುಗಳು ಧುತ್ತನೆ ಎದುರು ಬಂದು ನಿಲ್ಲುತ್ತದೆ. ಇಂತಹ ಸಂದರ್ಭದಲ್ಲಿ ಧೃತಿಗೆಡದೆ ಸಮಚಿತ್ತದಿಂದ ಯೋಚಿಸುವುದು ಬಹಳ ಮುಖ್ಯ. ಆಗ ಕಷ್ಟಗಳನ್ನು, ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ. ಸವಾಲುಗಳನ್ನೇ ಮೆಟ್ಟಿ ನಿಂತು ಬದುಕುವ ಧೈರ್ಯ, ಛಲ ಬರುತ್ತದೆ. ಈ ರೀತಿಯ ಅನೇಕ ಪ್ರತಿಭಾವಂತರ, ಸಾಧಕರ ವಿಡಿಯೋಗಳನ್ನು ನೀವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರಬಹುದು. ಸದ್ಯ ಅಂತಹದ್ದೇ ಮತ್ತೊಂದು ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದು ಬದುಕಿಗೂ ಪಾಠವಾಗಿದೆ.

Leave a Comment