ನೀವು ಮಾತು ಮಾತಿಗೂ ಕೋಪ ಮಾಡಿಕೊಳ್ಳುತ್ತಿದ್ದರೆ ಏನಾಗುತ್ತದೆ ಗೊತ್ತೇ??? ಇದನ್ನು ಒಮ್ಮೆ ನೋಡಿ..

ನೀವು ಕೆಲವು ಭಾರಿ ನೋಡಿರಬಹುದು ಕೆಲವರು ಕೋಪದಿಂದ ಹೇಗೆ ದುರ್ವರ್ತನೆ ತೋರುತ್ತಾರೆ ಎಂದು. ಆಗ ಅವರ ಸುತ್ತಮುತ್ತಲಿನವರಿಗೆ ಅನಿಸುವುದೇನೆಂದರೇ ಅಯ್ಯೋ ಇವರ ಸಹವಾಸವೇ ಬೇಡವೆಂದು. ಹೀಗೆ ಪದೇ ಪದೆ ಕೋಪದಿಂದ ರೇಗಾಡಲು ಕಾರಣ ಹಲವರು ಇದಾವೆ. ಅದರಲ್ಲಿ ಕೆಲವೆಂದರೆ ಅಹಂಕಾರ, ತಾವು ಏನು ಮಾಡಿದರು ಸಹಿಸಿಕೊಳ್ಳುತ್ತಾರೆ ಎಂಬ ಹಗುರ ಭಾವನೆ ಜೊತೆಗೆ ಮನಸ್ಥಿತಿ ಚೆನ್ನಾಗಿ ಇಲ್ಲದೆ ಇರುವುದು. ಹೌದು, ಯಾರಾದರೂ ಮತ್ತು ಯಾವಾಗಲೂ ವಿಪರೀತ ಕೋಪ ಮಾಡಿಕೊಳ್ಳುತ್ತಾರೆ ಎಂದರೆ ಅವರ ಮನಸ್ಥಿತಿ ಸರಿಯಿಲ್ಲ ಎಂಬುದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ಅವರಿಂದ ಪ್ರಚೋದನೆಗೆ ಒಳಗಾಗಿ ನೀವು ಕೂಡ ಅವರಂತಾಗದೆ ಶಾಂತಿಯಿಂದ ಇರಬೇಕು. ಮೊದಲು ಸಿಟ್ಟು ಒಳ್ಳೆಯದೋ ಕೆಟ್ಟದ್ದೋ ತಿಳಿಯಬೇಕು.

ಕೆಲವೊಮ್ಮೆ ನಾವು ಕೂಡ ಕಠಿಣವಾಗಿ ವರ್ತಿಸಬೇಕಾಗುತ್ತದೆ. ಉದಾಹರಣೆಗೆ ಕೆಲವು ಅಧಿಕಾರಿಗಳು ತಮ್ಮ ಕೈಕೆಳಗಿನ ಉದ್ಯೋಗಿಗಳು ಸರಿಯಾಗಿ ಕೆಲಸ ಮಾಡದೇ ಇದ್ದಾಗ, ಪೋಷಕರು ಮಕ್ಕಳನ್ನು ಬೆಳೆಸುವಾಗ. ಹಾಗೆಲ್ಲ ನಾವುಗಳು ನಿಜವಾಗಿ ಕೋಪ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅಗತ್ಯಬಿದ್ದಾಗ ಕೋಪ ಬಂದವರಂತೆ ನಟಿಸಿದರೂ ಸಾಕು. ನಿಜವಾಗಿಯೂ ಕೋಪ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಕೂಡ ಸಮಸ್ಯೆಗಳು ಶುರುವಾಗುತ್ತವೆ. ಆದ್ದರಿಂದಲೇ “ಮನೆ ಒಳಗಣ ಕಿಚ್ಚು ಮನೆಯ ಸು’ಟ್ಟಲ್ಲದೆ ನೆರೆಮನೆಯ ಸು’ಡದು” ಎಂದು ವಚನಕಾರರು ಕೋಪದ ಬಗ್ಗೆ ಹೇಳಿದ್ದಾರೆ. ಕೋಪ, ಅಸೂಯೆ, ದುಃಖ, ದುರಾಸೆ, ಕ್ರೋ’ಧ, ದ್ವೇಷ , ಅಹಂಕಾರ ಇವೆಲ್ಲವೂ ಮನಸಿನ್ನ ಋಣಾತ್ಮಕ ಭಾವನೆಗಳು ಎಂದು ಕರೆಯಲಾಗುತ್ತದೆ. ಇವು ಜೀವನವು ನಮ್ಮ ಇಚ್ಛೆಗೆ ವಿರುದ್ಧವಾಗಿ ನಡೆಯುವಂತೆ ಮಾಡುತ್ತದೆ.

ಇಂತಹ ಭಾವನೆಗಳಿಂದ ನಮಗೆ ಯಶಸ್ಸು ಸಿಗುವುದಿಲ್ಲ. ಕಾರಣ ಎಂದರೆ ನಾವು ಪ್ರಜ್ಞೆಯಿಂದ ಸಂಪೂರ್ಣವಾಗಿ ನಮ್ಮ ಬುದ್ಧಿ ಮನಸಿನ ಶಕ್ತಿ ಉಪಯೋಗ ಮಾಡಲು ಆಗುವುದಿಲ್ಲ. ಈ ಭಾವನೆಗಳು ಜೀವನದಲ್ಲಿ ಕೆಟ್ಟ ಕೆಟ್ಟ ಘಟನೆಗಳು ನಡೆಯಲು ಕಾರಣವಾಗುತ್ತವೆ. ಅದರಲ್ಲೂ ಪದೇ ಪದೇ ಕೋಪ ಮಾಡಿಕೊಳ್ಳುವುದನ್ನು ನಾವು ರೂಡಿ ಮಾಡಿಕೊಂಡರೆ ಮುಂದೊಂದು ದಿನ ಮನಸ್ಸಿನ ಸ್ಥೀಮೀತ ಕಳೆದುಕೊಂಡು ಹುಚ್ಚಾಸ್ಪತ್ರೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆ ಬರೆ ಹುಚ್ಚಾಗಿರಾಗಿರುವವರು ಕೂಡ ನಮ್ಮ ಸುತ್ತ ಮುತ್ತ ಇರಬಹುದು. ಅವರು ನೋಡಲು ಆರೋಗ್ಯವಂತರಂತೆ ಕಂಡರೂ ಹುಚ್ಚಾಗಿರುತ್ತಾರೆ. ಕೋಪವು ಹುಚ್ಚು ತನದ ಮೂಲ ಮತ್ತು ಲಕ್ಷಣ. ಮನುಷ್ಯರಿಗೆ ಸಹಜವಾಗಿ ಎಷ್ಟು ಸಿಟ್ಟು ಬರಬೇಕೊ ಅಷ್ಟೇ ಬರಬೇಕು. ಇಲ್ಲವಾದರೆ ಅದು ಮಾನಸಿಕ ಕಾಯಿಲೆ ಎಂದೇ ಕರೆಯಲ್ಪಡುತ್ತದೆ. ಕೋಪವನ್ನು ನಿಯಂತ್ರಣದಲ್ಲಿ ಇಡಲು ಅಥವಾ ಮಾನಸಿಕ ಆರೋಗ್ಯಕ್ಕಾಗಿ ಧ್ಯಾನ ಮತ್ತು ಯೋಗ ಮಾಡಲೇಬೇಕು.

Leave a Comment